ಮೈಕೆಲ್‌ ಮಧು ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿದ ಹಾಸ್ಯ ನಟರಾಗಿದ್ದರು .ಅವರು ಕನ್ನಡದ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ ಅಭಿನಯಿಸುವ ಮೂಲಕ ಮೈಕೆಲ್‌ ಮಧು ಜನಪ್ರಿಯತೆ ಪಡೆದುಕೊಂಡಿದ್ದರು. == ವೃತ್ತಿ == ಮೈಕೆಲ್ ಮಧು ಎಂಭತ್ತೈದಕ್ಕೂ ಹೆಚ್ಚು ಕನ್ನಡ ಚಿತ್ರಗಳ ಭಾಗವಾಗಿದ್ದಾರೆ. ನಟ, ನಿರ್ದೇಶಕ ಕಾಶಿನಾಥ್ ಹತ್ತಿರ ಅಭಿನಯ ಅಭಿನಯ ಕಲಿತ ಅವರು. ಹೆಚ್ಚು ಭಿಕ್ಷುಕನ ಪಾತ್ರಗಳ ಹಾಸ್ಯದ ಮೂಲಕ ಜನಪ್ರಿಯರಾಗಿದ್ದವರು. ಸಿಂಗಾರಿ ಬಂಗಾರಿ ಸಿನಿಮಾದಲ್ಲಿ ಮೊದಲು ನಟಿಸಿದ ಮಧು, ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಉಪೇಂದ್ರ ನಿರ್ದೇಶನದ ಲವ್‌ ಟ್ರೈನಿಂಗ್ ಸಿನಿಮಾದಿಂದ ಜನಪ್ರಿಯರಾದರು.ಚಲನಚಿತ್ರಗಳಲ್ಲಿ ನಟಿಸುವ ಮೊದಲು ಅವರಿಗೆ ನೃತ್ಯದಲ್ಲಿ ಆಸಕ್ತಿ ಇತ್ತು , ನೃತ್ಯ ನಿದೇಶಕರಾಗಲು ಬಯಸಿದ್ದರು .ನೃತ್ಯ ಮಾಡುತ್ತಿರುವದರಿಂದ ಅವರ ಹೆಸರಿನ ಜೊತೆ ಮೈಕೆಲ್ ಸೇರಿಕೊಂಡಿತು == ಚಿತ್ರಗಳು == ಸೂರ್ಯವಂಶ ಓಂ ಶ್‌ ಎ ಅಶ್ವಮೇಧ ಮಿನುಗು ತಾರೆ. ಗಾಜನೂರು ಗಂಡು ಯಮ ಲೋಕದಲ್ಲಿ ವೀರಪ್ಪನ್ ಸುಪ್ರಭಾತ ಈ ಹೃದಯ ನಿನಗಾಗಿ ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಪಾಪಿಗಳ ಲೋಕದಲ್ಲಿ. ವಾಲಿ ನೀಲಾಂಬರಿ ತಾಯಿ ಇಲ್ಲದ ತಬ್ಬಲಿ ಫಿಫ್ಟಿ ಫಿಫ್ಟಿ ಪೊಲೀಸ್ ಸ್ಟೋರಿ 3 == ನಿಧನ == ಮಧು ಹೃದಯಾಘಾತದಿಂದ 13-05-2020 ರಂದು ನಿಧನರಾದರು. == ಉಲ್ಲೇಖಗಳು ==